ಜಿಲ್ಲಾ ನ್ಯಾಯಾಲಯದ ಬಗ್ಗೆ
ನಮ್ಮ ಜಿಲ್ಲೆಯಲ್ಲಿ ಬ್ರಿಟಿಷ್ ರಾಜ್ ಸ್ಥಾಪಿಸಿದ ಮೊದಲ ನ್ಯಾಯಾಲಯ ಬ್ರಹ್ಮಾವರ ಸಮೀಪದ ಬಾರ್ಕೂರಿನಲ್ಲಿತ್ತು. ಆಗ ಇದನ್ನು ಜಿಲ್ಲಾ ಮುನ್ಸಿಫ್ ನ್ಯಾಯಾಲಯ ಎಂದು ಕರೆಯಲಾಗುತ್ತಿತ್ತು. ಜಿಲ್ಲಾ ಮುನ್ಸಿಫ್ ನ್ಯಾಯಾಲಯವು ಉಡುಪಿ, ಕಾರ್ಕಳ ಮತ್ತು ಕುಂದಾಪುರದ ಅಧಿಕಾರ ವ್ಯಾಪ್ತಿ ಹೊಂದಿತ್ತು. 1898 ರಲ್ಲಿ ಜಿಲ್ಲಾ ಮುನ್ಸಿಫ್ ನ್ಯಾಯಾಲಯವನ್ನು ಉಡುಪಿಗೆ ಸ್ಥಳಾಂತರಿಸಲಾಯಿತು. ಉಡುಪಿ ಆಗ ಅವಿಭಜಿತ ದಕ್ಷಿಣ ಕೆನರಾ ಜಿಲ್ಲೆಯ (ದಕ್ಷಿಣ ಕನ್ನಡ) ಭಾಗವಾಗಿತ್ತು. ಮದ್ರಾಸ್ ಹೈಕೋರ್ಟಿನ ವ್ಯಾಪ್ತಿಯಲ್ಲಿದ್ದ ಸೌತ್ ಕೆನರಾ ಜಿಲ್ಲೆಯನ್ನು 01-11-1956 ರಿಂದ ರಾಜ್ಯ ಮರುಸಂಘಟನೆ ಕಾಯಿದೆ ಜಾರಿಗೆ ಬಂದಾಗ ಮೈಸೂರು ಹೈಕೋರ್ಟಿನ ವ್ಯಾಪ್ತಿಗೆ ಸೇರಿಸಲಾಯಿತು. ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 18-12-2001 ರಂದು ಅಸ್ತಿತ್ವಕ್ಕೆ ಬಂದಿತು. ಜಿಲ್ಲಾ ನ್ಯಾಯಾಲಯವು ಉಡುಪಿ ಜಿಲ್ಲೆಯ ಏಳು ಕಂದಾಯ ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ, ಕಾಪು, ಬ್ರಹ್ಮಾವರ, ಹೆಬ್ರಿ ಮತ್ತು ಬೈಂದೂರುಗಳ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ.
ಉಡುಪಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಉಡುಪಿ
- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಉಡುಪಿ
- ಕೌಟುಂಬಿಕ ನ್ಯಾಯಾಲಯ, ಉಡುಪಿ
- ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಎಫ್.ಟಿ.ಎಸ್.ಸಿ-I, ಉಡುಪಿ
- II ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಉಡುಪಿ
- ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ, ಉಡುಪಿ
- ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಎಸಿಜೆಎಂ, ಉಡುಪಿ
- II ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಉಡುಪಿ
- ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಉಡುಪಿ
- I ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಉಡುಪಿ
- II ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಉಡುಪಿ
- III ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಉಡುಪಿ
- IV ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ, ಉಡುಪಿ
ಕುಂದಾಪುರ ತಾಲೂಕು ನ್ಯಾಯಾಲಯ ಸಂಕೀರ್ಣ, ಕುಂದಾಪುರ
- ಹೆಚ್ಚುವರಿ ಜಿಲ್ಲಾ ಮತ್ತು[...]
ಯಾವುದೇ ಪೋಸ್ಟ್ ಕಂಡುಬಂದಿಲ್ಲ.